Home
ಪಟ್ಟಣ ಪಂಚಾಯತ, ರಾಯಬಾಗ
ರಾಯಬಾಗ ಪಟ್ಟಣ ಪಂಚಾಯತಿಯು ಸನ್. 1973 ರಲ್ಲಿ ಸ್ಥಾಪನೆಯಾಯಿತು. ರಾಯಬಾಗ ಪಟ್ಟಣವು ತಾಲೂಕಾ ಕೇಂದ್ರವಾಗಿದ್ದು, ಜಿಲ್ಲೆ ಬೆಳಗಾವಿಯಿಂದ ಸುಮಾರು 100 ಕೀಲೋಮೀಟರ್ ದೂರದಲ್ಲಿರುತ್ತದೆ. ರಾಯಬಾಗ ಪಟ್ಟಣವು ಸುಮಾರು 18560 ಜನಸಂಖ್ಯೆಯನ್ನು ಹೊಂದಿರುತ್ತದೆ. ರಾಯಬಾಗ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ 15 ವಾರ್ಡ್ ಗಳಿದ್ದು 15 ಚುನಾಯಿತ ಸದಸ್ಯರು ಹಾಗೂ 3 ನಾಮನಿರ್ದೇಶಿತ ಸದಸ್ಯರಿರುತ್ತಾರೆ. ರಾಯಬಾಗ ಪಟ್ಟಣದ ವ್ಯಾಪ್ತಿಯು ಒಟ್ಟು 3.50 ಚದುರ ಕೀಲೋಮೀಟರ್ ಗಳಿರುತ್ತದೆ. ಪಟ್ಟಣವು ಅನೇಕ ಪುರಾತನ ದೇವಾಲಯಗಳನ್ನು ಹೊಂದಿದೆ. ಇಲ್ಲಿ ದೊರೆತ ಪ್ರಾಚೀನ ಜೈನ ಮೂರ್ತಿಗಳು ಇಲ್ಲಿಯ ಪೌರಾಣಿಕ ಹಿರಿಮೆಯನ್ನು ಎತ್ತಿ ತೋರಿಸುತ್ತವೆ. ರಾಯಬಾಗ ಪಟ್ಟಣವು ಅನೇಕ ಪ್ರಸಿದ್ದ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಇದರಿಂದ ಪಟ್ಟಣವು ಶೈಕ್ಷಣಿಕ ತಾಣವಾಗಿ ಹೊರ ಹೊಮ್ಮಿದೆ. ಪಟ್ಟಣವು ರಾಯಬಾಗ ಸಹಕಾರಿ ಸಕ್ಕರೆ ಕಾರಖಾನೆಯನ್ನು ಹೊಂದಿದೆ. ಇದು ತಾಲೂಕಿನ ರೈತರ ಜೀವನಾಡಿಯಾಗಿದೆ. ಪಟ್ಟಣವು ಬ್ರಿಟೀಷರ ಕಾಲಿನಿಂದ ರೈಲ್ವೆ ನಿಲ್ದಾಣವನ್ನು ಹೊಂದಿದೆ. ಇದರಿಂದ ಇದು ಸುತ್ತ ಮೂತ್ತಲಿನ ಹಳ್ಳಿಯ ಜನರ ಸಾರಿಗೆ ಸಂಪರ್ಕಕ್ಕೆ ಸಹಕಾರಿಯಾಗಿದೆ.
TOWN PANCHAYAT COUNCIL, RAIBAG
Town Raibag is constituted in 1973.Raibag is taluka place and away 100 Km from district place Belgaum.Town has a population 18560. Town had15 wards and equal number of councillors and three nominated members.Town has stretches to an area 3.5 Sq.Kms. Town had many historical temples. The jain statues found here are shows its historical shine. Town had many educational institutes which are bulid this town as educational town.It had a Sugar factory called as Raibag S.S.Ltd, Raibag. Town had railway station which is helpfull to peoples.
ಗಣಕೀಕರಣ: ರಾಯಬಾಗ ಪಟ್ಟಣದ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1998 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.
ಗಣಕೀಕರಣ: ರಾಯಬಾಗ ಪಟ್ಟಣದ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1998 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.
Computerisation : Properties within Raibag TP limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1998. Citizens can make use of this facility to register & obtain Birth & Death Certificates.
ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಘಟಕ : ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಪಟ್ಟಣ ಪಂಚಾಯತಿಯಲ್ಲಿ ಖುದ್ದಾಗಿ ಬಂದು ಅಥವಾ ಫೋನ್ ಮೂಲಕ ಅಥವಾ ಅಂತರ್ಜಾಲದಲ್ಲಿ ನೋಂದಾಯಿಸಿ ಪರಿಹಾರ ಕಂಡು ಕೊಳ್ಳಬಹುದು. ಫೋನ ನಂ. 08331-225236
"This Page is maintained by Shri.I.G.Konnur, Chief Officer, Town Panchayat, Raibag"

